Friday, 22 July 2016


ತಪ್ಪು ಯಾರದ್ದು ??


ಇದು ಸ್ವಾತಿಯ ಮದುವೆಯ ಕಥೆ. ಮೂವತ್ತರ ಹರೆಯದ ಸ್ವಾತಿಗೆ ಈಗಷ್ಟೇ ಮದುವೆ ನಿಶ್ಚಯವಾಗಿತ್ತು. ಸ್ವಾತಿ ಬೆಂಗಳೂರಲ್ಲಿ ಒಳ್ಳೆ ಉದ್ಯೋಗದಲ್ಲಿದ್ದಳು. ಅವಳ ಬಗ್ಗೆ ಊರಲ್ಲಿ ಕೆಲವು ಕಥೆಗಳಿದ್ದವು. ಮೂವತ್ತೈತು ಇನ್ನೂ ಮದುವೆ ಆಗಿಲ್ಲ ಇವಳಿಗೆ ಹುಡಗನ ಗೆಳೆತನ ಇರಬಹುದು. ಅದು ಇದು ಮತ್ತೊಂದು. ಆದರೆ ಸ್ವಾತಿಯ ಬದುಕಲ್ಲಿ ಒಬ್ಬ ಹುಡುಗ ಇದ್ದ. ಅವರದ್ದು ಆದರ್ಶ ಪ್ರೇಮಕಥೆ. ಅವರಿಬ್ಬರೂ ಒಂದೇ ಪ್ರಾಯದವರು. ಓದುವಾಗ ಇಬ್ಬರ ಮನೆಯಲ್ಲೂ ಕಷ್ಟವಿತ್ತು. ಒಬ್ಬರನೊಬ್ಬರು ಚೆನ್ನಾಗಿ ಅರಿತವರು. ಅವಳಿಗೆ ಹಲವು ಸಂಬಂಧಗಳು ಬಂದರೂ ಆಕೆ ಆತನನ್ನೇ ಮದುವೆಯಾಗೂದಾಗಿ ತೀರ್ಮಾನಿಸಿದ್ದಳು. ಅಂತೂ ಇಂತೂ ಮೂವತ್ತರ ಹರೆಯದಲ್ಲಿ ಅವರ ಕನಸು ಅಸ್ತಿತ್ವಕ್ಕೆ ಬರಲ್ಲಿತ್ತು. ಆದರೆ ಕಥೆ ಬೇರೆಯೇ ರೂಪ ತಾಳಿತು. ಸ್ವಾತಿಯ ಬಗೆಗಿನ ಕಥೆಗಳು ಇನ್ನೂ ಹೆಚ್ಚಾದವು. ದುರಂತದ ಹಂತಕ್ಕೆ ತಲುಪಿದವು. ಮದುವೆಯ ಒಂದು ವಾರದ ಮುಂಚೆ ಸ್ವಾತಿಯ ಹುಡುಗ ಬೈಕ್ ಅಪಘಾತದಲ್ಲಿ ಕೊನೆಯುಸಿರೆಳೆದ.
ಸ್ವಾತಿಯ ಹಲವು ವರ್ಷದ ಮದುವೆಯ ಕನಸು ಮುಗಿದು ಹೋಗಿತ್ತು. ‘ಸದ್ಯ ಮದುವೆ ಆಗಲಿಲ್ಲವಲ್ಲ ನಿಮ್ಮ ಮಗಳ ಬದುಕು ಗಟ್ಟಿ ಇದೆ’ ಅಂತ ಇನ್ನೂ ಮದುವೆ ಆಗದೆ ತಿರುಗುತ್ತಲ್ಲ ಎಂದವರೇ ಅಂದರು. ಸ್ವಾತಿ ಬಹಳ ಬಾರಿ ತನ್ನ ಹುಡಗನಿಗೆ ನಿಧಾನವಾಗಿ ಬೈಕ್ ಚಾಲಹಿಸುವ ಸೂಚನೆ ನೀಡಿದ್ದಳು. ಆತ ಅನುಸರಿಸದ ಒಂದೇ ಮಾತೆಂದರೆ ಅದು. ಬದುಕಿಗೆ ಮುಳುವಾಗಿತು. ಆತನ ಕೊನೆ ಬಾರಿ ನೋಡಲು ಧೈರ್ಯ ಮಾಡಿ ಹೊರತು ನಿಂತವಳಿಗೆ 'ನೀನು ಹೋಗಬೇಡ, ನಿನ್ನನ್ನು ಅಲ್ಲಿ ಅಳುವುದು ನೋಡಿದರೆ ಇನ್ನೂ ಯಾರು ಮದುವೆ ಆಗುತ್ತಾರೆ' ಎಂದು ಅವಳ ಅಮ್ಮ ವಾದಿಸಿದರು. ಆದರೆ ಅವಳ ಪ್ರೀತಿ ಅಲ್ಲಿಗೆ ಅವಳನ್ನು ನಿಲಿಸಲಿಲ್ಲ. 'ನೀನೇ ಕಾರಣ ನನ್ನ ಮಗನ ಸಾವಿಗೆ, ಬರಬೇಡ ಹತ್ತಿರ ನಡೆಯಿಲ್ಲಿಂದ, ಹೋಗು' ಎಂಬ ಹುಡಗನ ತಾಯಿಯ ಮಾತು ಸ್ವಾತಿಯ ಧೈರ್ಯವನೆಲ್ಲ ಮುಳುಗಿಸಿತು.
ಈ ಸಾವಿಗೆ ಯಾರು ಕಾರಣ. ಸ್ವಾತಿಯ ಮದುವೆ ಇನ್ನೂ ನೆರವೆರರಿಲ್ಲ ಯಾರು ಕಾರಣ. ಆಕೆ ಕೊನೆಯ ಬಾರಿಯ ಇಷ್ಟು ಪ್ರೀತಿಸಿದವನ್ನು ನೋಡಡಲಿಲ್ಲ. ಮೂವತ್ತು ವರ್ಷ ಕಾದ ಸ್ವಾತಿಯ ತಪ್ಪೇ? ವೇಗವಾಗಿ ಬೈಕ್ ಚಾಲಹಿಸಿದ ಹುಡಗನ ತಪ್ಪೇ? ಇಷ್ಟು ವರ್ಷಗಳ ಕಾಲ ಮದುವೆಯ ಅನುಭವವಿದ್ದ ಹಿರಿಯರು ಮದುವೆ ಎಂಬುದು ಒಂದು ದಿನ ಒಂದು ಶಾಸ್ತ್ರ ಎಂದುಕೊಂಡದ್ದು ತಪ್ಪೇ?
ಇದು ಪ್ರಿಯಾ ಹಾಗೂ ಅರ್ಜುನ್ ಗ್ರಹಾಪ್ರವೇಶದ ಕಥೆ. ಅವರ ಮದುವೆ ಎರಡು ವರ್ಷದ ಮುಂಚೆ ನಡೆದಿತ್ತು. ಒಂದೇ ವರ್ಷದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು ಪ್ರಿಯಾ. ಈ ಮಧ್ಯೆ ಅವಳು ಕೆಲಸ ಬಿಟ್ಟಳು. ಹೊಸ ಮನೆಯ ಯೋಜನೆ ಹಾಕಿಕೊಂಡರು ಇಬ್ಬರು. ಎಲ್ಲ ಅಂದುಕೊಂಡಂತೆ ನಡೆಯಿತು. ಇನ್ನೂ ಹೊಸ ಮನೆ ಗ್ಗ್ರಹಾಪ್ರವೇಶದ ಎಲ್ಲ ಸಜ್ಜಾಗಿಸಿ ಮನೆಗೆ ತೆರಳಿದ ಜೋರು ಗುಡುಗು ಮಳೆ. ಸಾಕು ಸಾಕದಾಗ ಒಮ್ಮೆ ಸ್ನಾನ ಮಾಡಿ ಬರುತ್ತೇನೆಂದು ಹೋದ ಅರ್ಜುನ್ ಸ್ನಾನದ ಕೊನೆಯಲ್ಲಿ ಗುಡುಗು ಹೊಡೆದು ಸಾವನ್ನಪ್ಪಿದ.


ಐಯ್ಯೋ!! ನೀನು ಈ ಮನೆಯಲ್ಲಿ ಇರಬೇಡ ಇಲ್ಲಿ ವಾಸ್ತು ಸರಿಯಿಲ್ಲ ಅದಕ್ಕೇ ಈಗೈತು ಎಂದು ಕೆಲವರ ವಾದ. ಇನ್ನೂ ಕೆಲವರು ನಿನ್ನ ಹೊಸ ಮನೆ ಸರಿಯಿಲ್ಲ ಅಲ್ಲಿಗೆ ಹೋಗಬೇಡ ಅಂದರು. ಇನ್ನೂ ಕೆಲವರು ನಿನಗೆ ಬುದ್ಧಿ ಇಲ್ಲವಾ ಗುಡುಗು ಮಿಂಚಿಗೆ ಸ್ನಾನ ಮಾಡಲು ಹೋಗಬೇಡಿ ಎಂದು ಹೇಳಬಾರದಿತ್ತ ಅಂದರು.
ಗಂಡನನ್ನು ಕಳೆದು, ಕೆಲಸವನ್ನು ಬಿಟ್ಟು ಇಬ್ಬರು ಮಕ್ಕಳ ತಾಯಿ ಯಾರಾ ಮಾತು ಕೇಳಬೇಕು.
ಯಾವ ಮನೆಯ ತಪ್ಪು?  ಗುಡುಗಿನ ತಪ್ಪೇ? ವಿವೇಚನೆ ಇಲ್ಲದೆ ಗುಡುಗು ಸಿಡಿಲಿನ ಸಮಯದಲ್ಲಿ ಸ್ನಾನಕ್ಕೆ ಹೋದ ತಪ್ಪೇ? ಆಯಾಸದ ತಪ್ಪೇ?

ಒಂದು ದತ್ತಾಂಶ ಗಣಿಗಾರಿಕೆ (ಡಾಟಾ ಮೈನಿಂಗ್)  ಸೆಮಿನಾರ್ ಕಥೆ. ವಿದ್ಯಾರ್ಥಿ ಒಬ್ಬಳು ಒಂದು ಒಳ್ಳೆ ವಿಷಯ ಪ್ರಸ್ತುತ ಪಡಿಸುತ್ತಿದ್ದಳು.  ಅಪರಾಧಗಳ ಮಾದರಿಯನ್ನು ದತ್ತಾಂಶಗಳ ಮೂಲಕ ಕಂಡುಹಿಡಿವ ಬಗ್ಗೆ. ಅದರ ಪ್ರಕಾರ 70ಶೇಕಡಾಕ್ಕೂ ಮೀರಿ ಅಪರಾಧಿಗಳು ಬಡತನ ರೇಖೆಗೆ ಸೇರಿದವರು ಅಂದಳು. ಅಷ್ಟೇ ಅಲ್ಲಿ ದೊಡ್ಡ ಚರ್ಚೆಯೇ ಪ್ರಾರಂಭವಾಯಿತು. ನಾವು ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದವ್ರೆಲ್ಲ ಒಳ್ಳೆ ಕಾನೂನು ಜನರಂತೆ ಚರ್ಚಿಸಿದೆವು. ಈ ಪ್ರಪಂಚದಲ್ಲಿ ಬಡವನೊಬ್ಬ 500 ರೂಪಾಯಿ ಕದ್ದರೂ ಅದು ಅಪರಾಧ ಎಂದು ದಾಖಲಾಗುತ್ತದೆ ಅದೇ ನಾವು ಹೇಳಲು ಬರೆಯಲು ಊಹಿಸಲೂ ಆಸಾಧ್ಯವಾದ ರೂಪಾಯಿ ಹಗರಣಗಳು ಮೂಲೆ ಸೇರುತ್ತವೆ. ಬಡವ ಮಾಡುವ ಕೊಲೆ ಸುಲಿಗೆ ಅಪರಾಧಗಳಲ್ಲಿ ದೊಡ್ಡವರ ಯೋಜನೆ ಇರುತ್ತದೆ ಆದರೆ ದಾಖಲಗುದಿಲ್ಲ.
ಹಾಗಾದ್ರೆ ದತ್ತಾಂಶಗಳು ದಾಖಲೆಗಳು ತಪ್ಪೇ? ಅಥವಾ ಅವುಗಳು ಅಸಂಪೂರ್ಣವೇ? ಬಡವ ಮಾಡಿದರೆ ಮಾತ್ರ ತಪ್ಪೇ?

ಇದೆಲ್ಲದರ ಮಧ್ಯೆ ನಮ್ಮ ಪದವಿ ಪೂರ್ವ ಕನ್ನಡ ಶಿಕ್ಷಕರು ಕೆಲವು ಬಾರಿ ಹೇಳಿದ ಕಥೆಯೊಂದು ನೆನಪಾಗುತ್ತಿದೆ. ಅವರು ಹೇಳಿದ ಒಂದೇ ಅರ್ಥದ ಕೆಲವೇ ಕಥೆಗಳಲ್ಲಿ ಇದು ಒಂದು. [ಸ್ವಲ್ಪ ತಿರುಚುತ್ತೇನೆ ಇಲ್ಲವೆಂದರೆ ಧರ್ಮನಿಂದನೆಯ ತಪ್ಪು ನನ್ನ ಮೇಲೆ ಖಂಡಿತ]

ಅರಸನೊಬ್ಬನ  ಮಹಾಯಾಗದ ಕಥೆ. ಎಡೆಬಿಡದೆ ಶತ್ರುಗಳ ದಾಳಿಯಿಂದ ಬೆಸೆತ್ತ ರಾಜ, ಪೂಜಾರಿಯಲ್ಲಿ ಒಂದು ಉಪಾಯ ಕೇಳುತ್ತಾನೆ. ಪೂಜಾರಿ ಒಂದು  ಮಹಾಯಾಗಾವಾಗಬೇಕು ಅನ್ನುತ್ತಾನೆ. ಅದು ಅಂತಿಂಥ ಯಾಗವಲ್ಲ ಕೋಟಿ ಹಣದ ಯಾಗ. ಪೂಜಾರಿ  ಆ ಯಾಗಕ್ಕೋಸ್ಕರ ತನ್ನ ಎಲ್ಲ ಬೇಡಿಕೆಯ ಜೊತೆಗೆ ಇಡೀ ಕುಟುಂಬದ ಬೇಡಿಕೆಯನ್ನೂನೀಡುತ್ತಾನೆ. ಅದರ ಜೊತೆಗೆ ರಾಜ್ಯದ ಎಲ್ಲ ಜನರು ಒಂದು ವಾರದ ಕಾಲ ಮಾಂಸಾಹಾರ ಸೇವಿಸಬಾರದು, ಮದ್ಯ ಸೇವಿಸಬಾರದು ಎನ್ನುತ್ತಾನೆ. ರಾಜ ತನ್ನ ಆಜ್ಞೆ ಹೊರಡಿಸುತ್ತಾನೆ.

ಆದರೆ ಒಂದು ದಿನ ರಾಜಕುಮಾರನೆ ಮಾಂಸಾಹಾರ ಸೇವಿಸಿದ ಬಗ್ಗೆ  ರಾಜನಿಗೆ ಸುದ್ದಿ ಸಿಗುತ್ತದೆ. ಮೊದಲೇ ಶತ್ರುಗಳ ದಾಳಿಗೆ ಕುಂದಿದ್ದ ರಾಜನಿಗೆ ಈಗ ಮಗನೆ ಪೂಜಾರಿ ಮಾತು ಮೀರಿದ ಭಯ. ಪೂಜಾರಿಯನ್ನು ಕರೆದು ಇದಕ್ಕೇನಾದರೂ ಉಪಾಯವಿದೆಯೇ ಎಂದಾಗ ಪೂಜಾರಿ 'ಹೌದು ಸ್ವಾಮೀ, ರಾಜನ ಮಗ ಕುಡಿದರೆ ಅದು ದೊಡ್ಡ ತಪ್ಪು, ಇದು ನಡೆದೂ ಯಾಗವಾಗಬೇಕೆಂದರೆ ರಾಜನು ಪೂಜಾರಿಗೆ ಮತ್ತು ಕುಟುಂಬಕ್ಕೆ ಜೀವನ ಪರ್ಯಂತ ಬೇಕಾಗುವ ಎಲ್ಲ ಆಹಾರ, ಖರ್ಚು ವೆಚ್ಚ ನೀಡಬೇಕು. ಆಗ ದೇವರು ರಾಜಕುಮಾರನ ತಪ್ಪು ಕ್ಷಮಿಸುತ್ತಾನೆ' ಅಂದನು.

ರಾಜ ಒಪ್ಪಿ ಪೂಜಾರಿಗೆ ಕಳುಹಿಸಲು, ರಾಜ್ಯದ ಮಂತ್ರಿ ಭಯದಿಂದ ಧಾವಿಸುತ್ತಾನೆ. 'ಐಯ್ಯೋ ರಾಜನೇ ನಿನ್ನೆ ನಿಮ್ಮ ಮಗನ ಜೊತೆ ನನ್ನ ಮಗನು ಇದ್ದ' ಎಂದಾಗ ರಾಜನ ಭಯ ಇನ್ನೂ ಜಾಸ್ತಿ ಆಯ್ತು. ಇನ್ನೊಮ್ಮೆ ಪೂಜಾರಿಯನ್ನು ಕರೆಸಿ ಪರಿಹಾರ ಕೇಳುವಾಗ ಪೂಜಾರಿ 'ಸ್ವಾಮೀ, ರಾಜನ ಹಾಗೂ ಮಂತ್ರಿಯ  ಮಗ ಇಬ್ಬರೂ ಸೇರಿ ಕುಡಿದರೆ ಅದು ಇನ್ನೂ ದೊಡ್ಡ ತಪ್ಪು, ನೀವು ಇಬ್ಬರೂ ದೇವರಿಗೆ ಪರಿಹಾರವೆಂದು ಪೂಜಾರಿಗೆ 20 ಲಕ್ಷ ನೀಡಬೇಕು' ಎಂದು  ಇನ್ನೂ ಜಾಸ್ತಿ ಬೇಡಿಕೆ ಇಡುತ್ತಾನೆ.

ಸಾಯಂಕಾಲ ಮಂತ್ರಿಯ ಮಗ ನಮ್ಮ ಜೊತೆಗೆ ಪೂಜಾರಿ ಮಗನು ಇದ್ದ ಎಂದಾಗ ಮಂತ್ರಿ ಇನ್ನೂ ಭಯಂದಿಂದ ರಾಜನಿಗೆ ಸುದ್ದಿ ತಿಳಿಸುತ್ತಾನೆ. ಇನ್ನೇನು ಈ ಯಾಗ ಸಾಧ್ಯವೇ ಇಲ್ಲ, ನಮ್ಮ ಮಕ್ಕಳು ಪೂಜಾರಿ ಮಗನಿಗೂ ಮಾಂಸಾಹಾರ ಮದ್ಯ ನೀಡಿದ್ದಾರೆಂದು ರಾಜ ಕುಂದಿ ಹೋಗುತ್ತಾನೆ.
ಪುನಃ ಪೂಜಾರಿಯನ್ನು ಕರೆದು 'ಕ್ಷಮಿಸಿ, ನಮ್ಮ ಮಕ್ಕಳು ನಿಮ್ಮ ಮಗನಿಗೂ ಮಾಂಸಾಹಾರ ಮದ್ಯ ನೀಡಿದ್ದಾರೆ, ನಾವು ಮುವ್ವಾರು ಸೇರಿ ಏನಾದರೂ ಪರಿಹಾರ ನೀಡಬಹುದೆ' ಎಂದ ರಾಜನ ಪ್ರಶ್ನೆಗೆ ಪೂಜಾರಿಯು 'ಸ್ವಾಮೀ, ರಾಜನ, ಮಂತ್ರಿಯ ಹಾಗೂ ಪೂಜಾರಿಯ ಮಗ ಒಟ್ಟಿಗೆ ಕುಡಿದರೆ ಅದು ಪಾಪವೇ ಅಲ್ಲ' ಅನ್ನಬೇಕೆ!!?
ಈ ಪ್ರಪಂಚದಲ್ಲಿ ತಪ್ಪು ಹುಡಿಕಿದಲ್ಲೆಲ್ಲ ಸಿಗುತ್ತದೆ. ಅದನ್ನು ಯಾವ ದ್ರಷ್ಟಿಕೋನದಲ್ಲಿ ನೋಡುತ್ತೇವೂ?
ಹೇಳಿ ಕಷ್ಟಗಳು ಹಾಗುರ ಮಾಡುವ ಪ್ರಯತ್ನಗಳೇ ತಪ್ಪೆಂದು ಅನಿಸೂದಿಲ್ಲವೇ?ತಪ್ಪೇ ಮಾಡದ ಸ್ವಾತಿಗೆ ಕಥೆಗಳ ಶಿಕ್ಷೆ, ಪ್ರಿಯಳಿಗೆ ಮಾತಿನ ಶಿಕ್ಷೆ?

ಕೇಳಿ ಕೇಳಿ ಕೋಟಿ ಕೋಟಿ ಹಗರಣಗಳು ಚಿಲ್ಲರೆ ಅನಿಸುವುದಿಲ್ಲವೆ ನಿಮಗೀಗ???  ಅವರೆಲ್ಲ ಹಾಯಾಗಿಲ್ಲವೇ??